header1

ಕವಿಕಾ ಗೆ ಸುಸ್ವಾಗತ

ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್(ಕವಿಕಾ), ಕರ್ನಾಟಕ ಸರ್ಕಾರಿ ಸ್ವಾಮ್ಯದ ಉದ್ದಿಮೆಯಾಗಿದ್ದು, ದೇಶದಲ್ಲಿ ವಿದ್ಯುತ್ ಟ್ರಾನ್ಸಾಫಾರ್ಮಸ್ಗಳ ಮೊಟ್ಟಮೊದಲ ತಯಾರಕರು ಹಾಗೂ 1933 ರಲ್ಲಿ ಮೈಸೂರಿನ ಹಿಂದಿನ ಮಹಾರಾಜರಿಂದ ಸ್ಥಾಪಿಸಲ್ಪಟ್ಟಿತ್ತು. ಈ ಕಾರ್ಖಾನೆಯು ಮೊದಲು ಸರ್ಕಾರಿ ಎಲೆಕ್ಟ್ರಿಕ್ ಫ್ಯಾಕ್ಟರಿಯೆಂದು ಕರೆಯಲ್ಪಡುತಿತ್ತು

ಇಂದು, 8 ದಶಕಗಳ ಯಶಸ್ವಿ ಕಾರ್ಯಾಚರಣೆಗಳ ನಂತರ, ಕವಿಕಾ 25kVA ರಿಂದ 500kVA ಹಾಗೂ 11kV/433V ಕ್ಲಾಸ್ ರ ವರೆಗೂ ಹಾಗೂ ಕಸ್ಟಮ್ ನಿರ್ಮಿತ / ವಿಶೇಷ ರೀತಿಯ ನಿರ್ದಿಷ್ಟ ಅಗತ್ಯಗಳ ಪ್ರಕಾರ ಟ್ರಾನ್ಸಾಫಾರ್ಮಸ್ ಗಳ ವಿತರಣೆಯಲ್ಲಿ ಹೆಸರಾಂತ ಉದ್ಯಮವಾಗಿ ಹೊರಹೊಮ್ಮಿದೆ.

ಸ್ಥಳ

ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿಮಿಟೆಡ್(ಕವಿಕಾ),
ಪೋಸ್ಟ್ ಬಾಕ್ಸ್ ಸಂಖ್ಯೆ 2610, ಮೈಸೂರು ರಸ್ತೆ, ಬೆಂಗಳೂರು – 560 026

ವಿಜನ್

ಅಧಿಕ ಸಾಮರ್ಥ್ಯದ ಟ್ರಾನ್ಸಾಫಾರ್ಮಸ್ ಗಳನ್ನು ಪೂರೈಸಲು ಹಾಗೂ ಸ್ಪರ್ಧಾತ್ಮಕ ದರದಲ್ಲಿ ವರ್ಧಿತ ಗ್ರಾಹಕ ತೃಪ್ತಿಯೊಂದಿಗೆ ಮತ್ತು ಉತ್ಪನ್ನಗಳ ಹಾಗು ಕ್ಯು.ಎಂ.ಎಸ್ ಗುಣಮಟ್ಟವನ್ನು ಸುಧಾರಿಸಲು ಸತತವಾಗಿ ಪ್ರಯತ್ನಿಸಲು ಬದ್ಧವಾಗಿದೆ.

ಉದ್ದಿಷ್ಠಕಾರ್ಯ

ಜಾಗತಿಕ ಸ್ಪರ್ಧಾತ್ಮಕ ಟ್ರಾನ್ಸಾಫಾರ್ಮಸ್ ಉತ್ಪಾದನಾ ಉದ್ಯಮವಾಗಲು ವಿನ್ಯಾಸ, ತಯಾರಿಕೆಯಲ್ಲಿ ಸ್ವಯಂ-ಅವಲಂಬನೆಯನ್ನು ಸಾಧಿಸುವುದು ಮತ್ತು ಸಲಕರಣೆಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು, ಸಂಬಂಧಿಸಿದ ಪ್ರದೇಶಗಳಿಗೆ ವೈವಿಧ್ಯತೆಯನ್ನು ನೀಡುವ ಸಾಧನವಾಗಿ ಕೆಲಸ ಮಾಡುವಾಗ, ವ್ಯವಹಾರ ಮತ್ತು ವಾಣಿಜ್ಯ ಮಾರ್ಗಗಳಲ್ಲಿ ವೃತ್ತಿನಿರತ ಸಾಮರ್ಥ್ಯ ಬೆಳೆಸಿಕೊಳ್ಳೂವುದು.

ನಮ್ಮ ಉತ್ಪನ್ನಗಳು

ಎನರ್ಜಿ ಸಾಮರ್ಥ್ಯ 3 ಸ್ಟಾರ್ ವರ್ಗದ ಟ್ರಾನ್ಸಾಫಾರ್ಮಸ್. ತಯಾರಿಕೆಯಲ್ಲಿ ಬಳಸಲಾದ ಎಲ್ಲಾ ವಸ್ತುಗಳು IS ನಿರ್ದಿಷ್ಟತೆಗಳ ಪ್ರಕಾರ ಇವೆ. ಎಲ್ಲಾ ಅಂಶಗಳು IS ಅವಶ್ಯಕತೆಗಳನ್ನು ಪೂರೈಸಲು ಪರೀಕ್ಷಿಸಲ್ಪಟ್ಟಿವೆ. ಖಾತರಿಯ ನಷ್ಟಗಳನ್ನು ಹೊರಹಾಕಲು ಮತ್ತು ಖಚಿತವಾದ ತಾಪಮಾನ ಏರಿಕೆಗಳನ್ನು ನಿರ್ವಹಿಸಲು ಸಾಕಷ್ಟು ತಂಪುಗೊಳಿಸುತ್ತದೆ - ಇದು ಟ್ರಾನ್ಸಾಫಾರ್ಮಗೆ ದೀರ್ಘಾವಧಿಯ ಜೀವನವನ್ನು ನೀಡುತ್ತದೆ.

ಕನ್ವೆಂಷನಲ್ ಟ್ರಾನ್ಸಾಫಾರ್ಮಸ್

ಸಿಂಗಲ್ ಫೇಸ್ ಅಲುಮಿನಿಯಮ್ ವೂಂಡ್ ಟ್ರಾನ್ಸಾಫಾರ್ಮಸ್ (ಪೋಲ್ ಮೌಂಟಿಂಗ್) 3 ಫೇಸ್ ಅಲುಮಿನಿಯಮ್ ವೂಂಡ್ ಟ್ರಾನ್ಸಾಫಾರ್ಮಸ್ (3 ಸ್ಟಾರ್ ರೇಟೆಡ್ ಟ್ರಾನ್ಸಾಫಾರ್ಮಸ್) 3 ಫೇಸ್ 11Kv/433v ಅಲುಮಿನಿಯಮ್ ವೂಂಡ್ ಟ್ರಾನ್ಸಾಫಾರ್ಮಸ್ ( ಟ್ಯಾಪ್ಸ್ ಅಥವ ಟ್ಯಾಪ್ಸ್ ರಹಿತ) 3 ಫೇಸ್ ಕಾಪರ್ ವೂಂಡ್ ಟ್ರಾನ್ಸಾಫಾರ್ಮಸ್

ಸ್ಪೆಷಲ್ ಟ್ರಾನ್ಸಾಫಾರ್ಮಸ್

ಸಿಂಗಲ್ ಫೇಸ್ ನ್ಯೂಟ್ರಲ್ ಗ್ರೌಂಡಿಂಗ್ ಟ್ರಾನ್ಸಾಫಾರ್ಮಸ್, ಬೂಸ್ಟರ್ ಟ್ರಾನ್ಸಾಫಾರ್ಮಸ್, ಸ್ಪೆಷಲ್ ಡಿಸೈನ್ ಟ್ರಾನ್ಸಾಫಾರ್ಮಸ್

ಫೋಟೋ ಗ್ಯಾಲರಿ